Wednesday, December 31, 2008

ಕಳೆಯಿತು ಮತ್ತೊಂದು ವರ್ಷ


ಕಳೆಯಿತು ಮತ್ತೊಂದು ವರ್ಷ
ಹರ್ಷವೂ ಇತ್ತು, ಸಮಸ್ಯೆಗಳ ವರ್ಷವೂ ಇತ್ತು ಯುಗಾದಿಯಂತೆ. ಮತ್ತೆ ಗೋಡೆ ಮೇಲಿನ ಕ್ಯಾಲೆಂಡರ್ ಬದಲಿಸಿ ಹೊಸ ವರ್ಷ ಬರಮಾಡಿಕೊಳ್ಳುತ್ತಿದ್ದೇವೆ
ಈ ವರ್ಷವಾದರೂ ಹರ್ಷ ಹೆಚ್ಚಾಗಿರಲಿ. ಬೇವೂ ಇರಲಿ, ಇಲ್ಲದಿದ್ದರೆ ಬೆಲ್ಲದ ಸವಿ ಗೊತ್ತಾದೀತು ಹೇಗೆ?
2008ರ ಅಂತ್ಯದ ತಿಂಗಳು ನನಗೆ ನಾನಾ ಅನುಭವ ನೀಡಿತು. ವಿವಾದಿತ ಸುದ್ದಿಯೊಂದರ ಬೆನ್ನತ್ತಿದ್ದು, ನಂತರ ಅರಬಾವಿ ಚುನಾವಣಾ ವರದಿಗೆ ತೆರಳಿ ಸಾಕಷ್ಟು ಅನುಭವ ಪಡೆದುಕೊಂಡು ಬಂದೆ. ಒಂದಿಷ್ಟು ರೋಚಕ ಕಥೆಗಳನ್ನು ಗೋಕಾಕದಲ್ಲಿ ಕೇಳಿ ಬಂದಿದ್ದೇನೆ. ಅವೆಲ್ಲವನ್ನೂ ಹೇಳಿಕೊಳ್ಳುವ ಆಶಯವಿದ. 2009ರಲ್ಲಿ ನಾನು ನಿಮಗೆ ಕಥೆ ಹಳಿ ಕಾಡುತ್ತೇನೆ. ಸಹಿಸಿಕೊಳ್ಳಿ.
2008ರಲ್ಲಿ ನನ್ನ ಟೀಕಿಸಿ ತಪ್ಪು ತಿದ್ದಿಕೊಳ್ಳುವಂತೆ ಮಾಡಿದವರಿಗೆ, ಸವಾಲು ಹಾಕಿ ನನ್ನ ಶಕ್ತಿ, ದೌರ್ಬಲ್ಯ ತಿಳಿಸಿಕೊಟ್ಟವರಿಗೆ, ನಿಂದಿಸುವವರೆ ಹೆಚ್ಚಿದ್ದಾಗ ಮೆಚ್ಚಿ ಬೆನ್ನು ತಟ್ಟಿದವರಿಗೆ, ನಾನು ಏನೇ ಮಾಡಿದರೂ ಸಲಹುವ, ಪ್ರೀತಿಸುವ ಅವ್ವ, ಅಪ್ಪ, ತರಲೆ ತಮ್ಮ ಹಾಗೂ ಅಸಂಖ್ಯ ಗೆಳೆಯರಿಗೆ ಧನ್ಯವಾದಗಳು. ಇಂಥದಕ್ಕೆಲ್ಲಾ ಕಾರಣವಾಗಿರುವ ನನ್ನ ಸಂಸ್ಥೆಗೆ, ಸಹೋದ್ಯಗಿಗಳಿಗೆ 2009 ಒಳಿತು ಮಾಡಲಿ. ನಿಮ್ಮ ಕನಸುಗಳು ನನಸಾಗಲಿ, ನಿಮ್ಮ ಗುರಿಗಳಿಗೆ ನೀವು ತಲುಪಿಕೊಳ್ಳಿ ಎಂಬ ಹಾರೈಕೆಯೊಂದಿಗೆ...,

5 comments:

Anonymous said...

banditu mattondu nootana varsha
heli heli kate heli adre bore hodeyo tara helbedi wish you happy new year ram mysore

chanakya said...

ಅರಭಾವಿ ಚುನಾವಣೆಯಲ್ಲಿ ಏನೇನೋ ನೋಡಿಕೊಂಡು ಬಂದೀದೀನಿ ಅಂತೀಯಾ? ಅದೇನೇನು ಕತೆ ಹೇಳ್ತೀಯೋ ಕಾಯ್ತಾ ಇರ್ತೀನಿ. ಮಂಡ್ಯದಗಂಡಿಗೆ ೨೦೦೯ ಒಳ್ಳೆದು ಮಾಡ್ಲಿ.
ಹೊಸ ವರುಶ ತರಲಿ ಹರುಶ..ಕೆಟ್ಟದ್ದು ಆಗಲಿ ಅ..ವಿನಾಶ.

ಎಂ. ಮಹೇಶ್ ಭಗೀರಥ said...

ಕಳೆದ ಕಾಲದ ಸ್ಮಶಾನದಲ್ಲಿ
ನೆನಪುಗಳ ಭೂತಗಳು
ಕುಣಿಯತ್ತಿವೆ; ಕಾಡುತ್ತಿವೆ..!
ಕಾಲ ಸಾಯುತ್ತದೆ ಏಕೆ?
ನೆನಪುಗಳ ಭೂತ ಸೃಷ್ಟಿಸಲೇ?!

ಗೋವಿಂದ್ರಾಜ್ said...

En guru ninnannu 2008 ralli teekisidavaranna hechchu nenibeku ekendre adu ninnalli kichchu hachchide alva? Ah ha ha

ಅವಿ said...

ಪ್ರೀತಿಯ ಗೋವಿಂದ ಮೇಷ್ಟ್ರೆ. ನೀವು ಹೇಳಿದ ಹಾಗೆಯೇ ನಾನು ಮಾಡೋದು. ಹೆಚ್ಚಾಗಿ ನಾನು ಕಿವಿಗೊಟ್ಟು ಆಲಿಸೋದು ಟೀಕೆಗಳನ್ನೇ. ಆ ಟೀಕೆಯಲ್ಲಿ ಕಾಳಜಿ, ಸತ್ಯ ಇದೆ ಎನಿಸಿದರೆ ಚೂರು ಮುಜುಗರವಿಲ್ಲದೆ ಒಪ್ಪಿಕೊಂಡು, ಸಾಧ್ಯವಾದರೆ ತಿದ್ದುಕೊಳ್ಳುತ್ತೀನಿ. ಅವರನ್ನು ನೆನೆಯುತ್ತೇನೆ. ಎಲ್ಲೋ ಒಂದು ಕಡೆ ಡಾ. ರಾಜ್ ಹೇಳಿದ್ರು - ಹೊಗಳಿಕೆಗೆ ಮೌನಿಯಾಗಿರು, ತೆಗಳಿಕೆಗೆ ಧ್ಯಾನಿಯಾಗಿರು ಅಂತ. ಏಕೋ ಗೊತ್ತಿಲ್ಲ ಆ ಮಾತು ಮರೆಯಲಾಗಿಲ್ಲ.