Tuesday, December 9, 2008

ಹೋಕೈತ್ರಿ, ಹೋಟೆಲ ಧಾರವಾಡದಲ್ಲೂ ಹೋಗ್ತಾ ಇದೆ ರೀ..,




"ಬಸವೇಶ್ವರ ಹೋಟೆಲ್ದಾಗ ನಾಷ್ಟಾ ಮಾಡಿ ಹೋಕೀನಿ. ನೀನೂ ಹೋಟಲ್ಗಾ ಬಂದ್ಬುಡ್ರಲಾ. ಅಲ್ಲಿ ದೀಡ್ ರೂಪಾಯ್ಗೊಂದು ಇಡ್ಲಿ ಸಿಕ್ತಾವು. ಪೌಣೆ ರುಪಾಯ್ಗೆ ಚಾ ಸಿಕ್ತಾವು. ಹೋಟೆಲ ಬಾಜೂಕ ಬಸ್ ಬರ್‍ತಾವು, ಅಲ್ಲಿಂದಲೇ ಶಾಲಿಗೆ ಹೋಗುವಂತೆ. ನಾ ಎಮ್ಮಿಕೆರಿಗೆ ಹೋಕೀನಿ. ಏನ್ ಮಾಡ್ಲಿಕತ್ತಿ ಲಘುನ ಬಾ"....
ಇದು ಹುಬ್ಬಳ್ಳಿ -ಧಾರವಾಡ ಸೊಗಡಿನ ಭಾಷೆ. ವ್ಯಂಜನಗಳ ಹಂಗಿಲ್ಲ. ಶಬ್ಧಗಳನ್ನು ಅರ್ಧ ಉಚ್ಛರಿಸಿ ಗೊತ್ತಿಲ್ಲ. ಅವರ ಹೃದಯ ವೈಶ್ಯಾಲ್ಯದಂತೆಯೇ ಪದ ಉಚ್ಛಾರದಲ್ಲೂ ಇಲ್ಲಿನವರು ಜಿಪುಣರಲ್ಲ. ಕೆಲವು ನಾಮಪದಗಳನ್ನು ಉಚ್ಛರಿಸುವ ಕೊನೆಯಲ್ಲಿ 'ಇ' 'ಈ' ಕಾರ ಬಳಸುತ್ತಿದ್ದರು. ಮಾತುಕತೆಯ ವೇಳೆ ಹೇರಳವಾಗಿ ಮರಾಠಿ ಹಾಗೂ ಹಿಂದಿ ಪದಗಳು ಬಳಕೆಗೆ ಬರುತ್ತಿದ್ದವು. ಈ ಶೈಲಿ ನಿಧಾನವಾಗಿ ಮಾಯವಾಗುತ್ತಿದೆ.
ಇನ್ನು ಹತ್ತಿಪ್ಪುತ್ತು ವರ್ಷಗಳಿಗೆ ಈ , ಭಾಷೆ , ಈ ಸೊಗಡು ಇತಿಹಾಸ ಆಗುತ್ತದೆ. ಈ ಸೊಗಡಿನಲ್ಲಿ ಬರೆದಿರುವ ಪುಸ್ತಕ, ಕರಪತ್ರ ಸಿಕ್ಕರೆ ಮುಂದಿನ ತಲೆ ಮಾರಿನವರು ನಾವುಗಳು ಈಗ ಹಳಗನ್ನಡದ ಶಾಸನ ಓದಲು ತಡವರಿಸುವಂತೆಯೇ ತಡವರಿಸುವ ಕಾಲ ಬಂದರೂ ಆಶ್ಚರ್ಯವಿಲ್ಲ. ಹಾಗೆ ಇಲ್ಲಿ ಭಾಷೆ ಬದಲಾಗುತ್ತಿದೆ.
ಹಳೇ ಮೈಸೂರು ಭಾಗದ, ರಾಜಧಾನಿ ಬೆಂಗಳೂರಿನಂತೆ ಇಲ್ಲಿನ ಭಾಷೆಯಲ್ಲಿ ಈಗ ಹೇರಳವಾಗಿ ಇಂಗ್ಲಿಷ್ ಬಳಕೆಯಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಫ್ಲೆಕ್ಸ್ ಬೋರ್ಡುಗಳು ಬಂದು ಇಲ್ಲಿನವರನ್ನು ವ್ಯಂಜನ ಬಳಸುವಂತೆ, ಪದ ಬಳಕೆಯಲ್ಲಿ ಜಿಪುಣರಾಗುವಂತೆ ಮಾಡಿದೆ.
ವೋಡಾಫೋನ್, ಏರ್‌ಟೆಲ್ ಕಂಪನಿಯ ಬೋರ್ಡುಗಳನ್ನು ಇಲ್ಲಿಯ ಪ್ರಕಾರ ಬರೆದರೆ ವೋಡಾಫೋನ, ಏರಟೆಲ ಎಂದು ಬರೆಯಬೇಕಿತ್ತು. ಆ ರೀತಿಯ ಒಂದೇ ಒಂದು ಬೋರ್ಡು ಕಾಣ ಸಿಗುವುದಿಲ್ಲ. ಇದು ಉದಾಹರಣೆ ಮಾತ್ರ. ಹೋಟೆಲ್, ರೆಸ್ಟೋರಂಟ್, ಕ್ಲಿನಿಕ್ ಎಂಬ ಪದಗಳು ಚಾಲ್ತಿಗೆ ಬಂದಿವೆ. ಇದಕ್ಕೆ ಮೊದಲ ಕಾರಣ ಬೆಂಗಳೂರಲ್ಲೇ ತಯಾರಿಗೆ ಬರುವ ಫ್ಲೆಕ್ಸ್ ಬೋರ್ಡು.
ಇನ್ನು ಭಾಷೆಯಲ್ಲಿನ ಬದಲಾವಣಗೆ ಮೊದಲ ಕೊಡುಗೆ ಟಿವಿ ಮತ್ತು ಸಿನಿಮಾದ್ದು. ನಂತರದ್ದು ಇಲ್ಲಿನವರು ನೌಕರಿಗಾಗಿ ಬೆಂಗಳೂರಿಗೆ ಹೋಗಿ ನೆಲೆಸಿದ್ದು. ಇಲ್ಲಿನ ಸೊಗಡಿನ ಭಾಷೆಗೆ ಅಲ್ಲಿನ ಮಂದಿ ನಕ್ಕಿದ್ದರಿಂದ ಅನಿವಾರ್ಯವಾಗಿ ಬೆಂಗಳೂರಿನ ಭಾಷೆ ವಾತಾವರಣಕ್ಕೆ ಒಗ್ಗಿಕೊಂಡಿದ್ದು ಎನ್ನುತ್ತಾರೆ .
?ಹೋಟೆಲ, ವೋಲಸೇಲ, ಗಜಾನನ ಟ್ರೇಡರ್ಸ, ಮೊಬೈಲ ಪಾಯಿಂಟ, ಎಲೆಕ್ಟ್ರಾನಿಕ್ಸ, ಬ್ಯಾಳಿ, ಬಾಳಿಹಣ್ಣು? ಇತ್ಯಾದಿ ಇಲ್ಲಿನ ಸೊಗಡಿನ ಪದಗಳು ಇನ್ನು ಕೆಲವೆಡೆ ಕಾಣಸಿಗುತ್ತವೆ. ಕಾರಣ ಅವನ್ನು ಇಲ್ಲಿನ ಕಲಾವಿದರ ಕೈಯಲ್ಲಿ ಬರೆಸಿರುತ್ತಾರೆ. ಅಥವಾ ಇತ್ತೀಚೆಗೆ ಈ ಕಡೆಗೂ ಬಂದಿರುವ ಫ್ಲೆಕ್ಸ್ ಮುದ್ರಣದಿಂದ ಅವರು ಸಿದ್ಧಗೊಂಡಿರುತ್ತವೆ.
ಕೆಲವೇ ಕೆಲವು ಸಿನಿಮಾ ಧಾರವಾಹಿ ಬಿಟ್ಟರೆ ಬೇರೆಲ್ಲೂ ಇಲ್ಲಿನ ಭಾಷೆ ಬಳಕೆಯಾಗುತ್ತಿಲ್ಲ. ಇಲ್ಲಿಂದ ಹೋದ ಕಲಾವಿದರು ಈ ಬಗ್ಗೆ ಗಂಭೀರ ಪ್ರಯತ್ನ ಮಾಡಿಲ್ಲ. ಎಲ್ಲಕ್ಕೂ ಗೇಲಿಯ ಹಿಂಜರಿಕೆ ಕಾರಣ. ಸಿದ್ದಲಿಂಗ ಪಟ್ಟಣಶೆಟ್ಟರು ಇಲ್ಲಿಯದೇ ಭಾಷೆಯಲ್ಲಿ ಬರೆಯುತ್ತಿದ್ದ ?ಚಹಾದ ಜೋಡಿ ಚೂಡದ್ಹಾಂಗ? ಜನಪ್ರಿಯವಾಗಿತ್ತು.
ಜಾಗತೀಕರಣದ ಹೊಡೆತದಿಂದ ದೇಶದೆಲ್ಲಡೆ ಸಾಂಸ್ಕೃತಿಕ ಪಲ್ಲಟ ನಡೆಯುತ್ತಿರುವಂತೆಯೇ, ಹುಬ್ಬಳ್ಳಿ -ಧಾರವಾಡದ ಭಾಷೆಯ ಅನನ್ಯತೆ, ಸೊಗಡು ಮಾಯವಾಗುತ್ತಿದೆ
. ಅನ್ಯನತೆ ಉಳಿಸಿಕೊಳ್ಳಬೇಕಾ? ತಂತ್ರಜ್ಞಾನ -ಮಾಧ್ಯಮಗಳು ಬಡಿಸುತ್ತಿರುವ ರೆಡಿಮೇಡ್ ಭಾಷೆಯನ್ನೇ ಅಳವಡಿಸಿಕೊಳ್ಳಬೇಕಾ? ಯಾವುದು ಶುದ್ಧ? ಯಾವುದು ಅಶುದ್ಧ? ಎಂಬ ಪ್ರಶ್ನೆಗಳು ಏಳುವುದುಂಟು. ಇದಾವ ಪ್ರಶ್ನೆಗಳಿಗೂ ಕಿವಿ ಕೊಡುವ ವ್ಯವಧಾನವೂ ಇಲ್ಲದೆ ಇಲ್ಲಿ ಭಾಷೆ ಬದಲಾಗುತ್ತಿದೆ. ಬದಲಾವಣೆ ಮಾತ್ರ ಶಾಶ್ವತ ಎನಿಸುವುದಿಲ್ಲವೇ...?

10 comments:

ಬಹುಮುಖ said...
This comment has been removed by the author.
ಬಹುಮುಖ said...

ಅದಕ್ಕಂಡ ನಾ ಒಂದಪ ನಿನ್ ಬ್ಲಾಗ್ ಬಂದುದು.

ಬಹುಮುಖ said...

నుకు అర్తికల్లు భాగ చలుంది. ఇక్కక బెంగాలురులు అదే అయ్తుంది. ఎక్కడ చూపిస్తా తెలుగు తమిళు మరాటి మలయాళం ఇండి ఇద్న్గ్లిష మాటలాడతారు. కన్నడ చాల వర్స్ట్ అయింది.(ನೂಕು ಆರ್ಟಿಕಲ್ಲು ಭಾಗ ಚಾಲುಂಡಿ. ಇಕ್ಕದ ಬೆಂಗಳುರುಳು ಅದೇ ಆಯ್ತುಂದಿ. ಎಕ್ಕಡ ಚೂಸ್ತನು ಅಕ್ಕದ ತೆಲುಗು ತಮಿಳು ಮರಾಠಿ ಮಲಯಾಳಂ ಹಿಂದಿ ಇಂಗ್ಲೀಷ್ ಮತಲಾಡ್ತಾರು.ಕನ್ನಡ ಚಾಲ ವರ್ಸ್ಟ್ ಅಯಿಂದಿ.)

chanakya said...

dear friend neenu yistu chennagi bareethiya anthe gothagidde yeege.channagide mundenu barkandogu.

ajad said...

man just visit my blog. read the article 'playing with students life'. I expect yo to make an article about it with the help of your bengaluru reporters.
with regards,
kr

Anonymous said...

ha hottelanaga neev estottu kuttidiri neev kardidra navu bartitidvlri

Anonymous said...

darawad hotel bittu ivaga arabahavi hogaka hattirenu

Anonymous said...

patrakartaru andre tamma hotte tumbisikollodakke bereyavar bagge bareyoru annisodilva nimage

Anonymous said...

patrakarthara bagge sariyagi helidhare nannadu bembala

ಅವಿ said...

ಪ್ರೀತಿಯ ಅನಾಮಿಕ ಮತ್ತು ಮಹೇಶ್ ಅವರೇ..,
ನಿಮ್ಮ ಅಭಿಪ್ರಾಯ ಅರ್ಧ ಸತ್ಯ. ದೇಶದಲ್ಲಿ ಗಡಿ ಕಾಯುವ ಯೋಧರೂ ಕೂಡ ನಿಮ್ಮ ಕಣ್ಣಿಗೆ ಹಾಗೇ ಕಾಣಬಹುದು. ಕೇವಲ ಹೊಟ್ಟೆಪಾಡಿಗಾಗಿ ದೇಶಪ್ರೇಮದ ಸೋಗು ಹೊದ್ದವರು ಎಂದು. ಜನಕ್ಕೆ ರೋಗ ಬರಲಿ ಎಂದು ಜಪಿಸುವುದೇ ನಿಮ್ಮ ಕೆಲಸ ಅಲ್ಲವೇ ಎಂದು ಡಾಕ್ಟರ್ಗಳನ್ನು ರೇಗಿಸದಂತಿದೆ ನಿಮ್ಮ ಮಾತು. ಹಳದಿ ಕಣ್ಣಿನಿಂದ ನೋಡಿದರೆ ಎಲ್ಲವೂ ಹಾಗೆ ಕಾಣುತ್ತದೆ. ಹೊಟ್ಟೆ ತುಂಬಿಸಿಕೊಳ್ಳುವುದು ಮಾತ್ರವೇ ಕೆಲಸದ ಉದ್ದೇಶವಾಗಿಸಿಕೊಂಡರೆ ನೀವು ಹೇಳಿದ್ದು ನಿಜವೂ ಆಗಬಹುದು. ಪ್ರತಿ ಕೆಲಸದ ಹಿಂದೆ ಒಂದು ಕಾಳಜಿ, ಕಳಕಳಿ, ಆತ್ಮತೃಪ್ತಿ ಎಂಬ ಮೋಹ ಇರುತ್ತದೆ. ಹೊಟ್ಟೆಪಾಡು ಒಂದು ನೆಪ ಅಷ್ಟೇ.. ಇದಕ್ಕೂ ಹಳದಿ ಕಿವಿ ನಿಮ್ಮದಾದರೆ ಅದು ನಿಮ್ಮ ಪ್ರಾಬ್ಲಂ. ನಿಮ್ಮ ಪ್ರತಿಕ್ರಿಯೆಗಳು ಹೀಗೆ ಇರಲಿ