Saturday, July 17, 2010
ಮತ್ತೆ ಬರೆಯುವಾಸೆ......?!
ನಿಮ್ಮ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ
ಧಾರವಾಡದ ಜನದ ಮನ ತೋರಿದ ಪ್ರೀತಿಗೆ
ಇಲ್ಲ ಯಾವುಧೆ ಹೋಲಿಕೆ
ಪ್ರೀತಿ ಹೀಗೆ ಇರಲಿ
ಹೋಗಿ ಬರುವೆ
ಎಂದು ಮೆಸ್ಸಜಿಸುವ ಹೊತ್ತಿಗೆ ಕಣ್ಣು ಕಾಣದಷ್ಟು ನೀರು ಹರಿಯ ತೊಡಗಿತ್ತು. ಮೈಸೂರ್ ಬಿಟ್ಟು ಧಾರವಾಡಕ್ಕೆ ಹೋಗುವಾಗಲು ಹೀಗೆ ಆಗಿತ್ತು. ಗೊತ್ತಿಲ್ಲದ ಜನ, ಮನ ಬದುಕುವುದು ಹೇಗೋ ಎನ್ನುವ ಆತಂಕ ಒತ್ತುಕೊಂಡೆ ಹೋಗಿದ್ಧೆ. ಬಟ್ ಕೆಲವೇ ದಿನದಲ್ಲಿ ನಾನು ಧಾರವಾಡಿಗನಾಗಿಬಿಟ್ಟೆ. ಧಾರವಾಡವನ್ನು ಬಿಟ್ಟು ವರ್ಷ ಆಗಿ ಹೋಯ್ತು. ಆದರು ಧಾರವಾಡವನ್ನು ಪದೇ ಪದೇ ಮಿಸ್ ಮಾಡ್ಕೊತಿದಿನಿ. ನನ್ನ ಮಾತಿನ ಶೈಲಿಯಲ್ಲಿ ಇನ್ನು ಧಾರವಾಡದ ಸೊಗಡಿದೆ. ಹೀಗಾಗಿ ತುಂಬಾ ಜನ ನೀವು ಧಾರವಾಡದವರ ಅಂತಾರೆ. ನಾನು ಎಸ್ ಅಂತೇನೆ.
ಬೆಂಗಳೂರಿಗೆ ಹೋದ ಮೇಲೆ ಬದಲಾಗ್ತಿಯ ಅಂತ ಕೆಲವರು ಹೇಳಿದ್ರು. ಹೌದು ಅವರ ಅರ್ಧ ಮಾತು ನಿಜವಾಗಿದೆ. ಬೆಂಗಳೂರಿಗೆ ಬಂದ ಕೇವಲ ನಾಲ್ಕು ತಿಂಗಳಲ್ಲಿ ಕೆಲಸ ಬದಲಾಯ್ತು. ಅದಕ್ಕೆ ತಕ್ಕಂತೆ ಕೆಲ ಕಾಲ ಬಟ್ಟೆಯೂ ಬದಲಾಗಿತ್ತು. ನನ್ನ ದಡೂತಿ ದೇಹ, ನನ್ನ ಯೋಚನೆ, ಯೋಜನೆ ಮಾತ್ರ ಬದಲಾಗಲಿಲ್ಲ. ಟಿವಿ ಸೇರಿದ ಮೇಲೆ ಬರವಣಿಗೆ ಅನ್ನೋದು ನಿಂತೇ ಹೋಗಿದೆ.
ಬೆಂಗಳೂರು ಕನ್ನಡಪ್ರಭ ದಲ್ಲಿ ಇರುವಷ್ಟು ದಿನ ಬೆಂಗಳೂರಿನ ಆತುರಕ್ಕೆ ಹೊಂದಿಕುಳ್ಳುವುದೇ ಆಗಿತ್ತು. ಅದಾದ ಮೇಲೆ ಟಿವಿ ಎಂಬ ಪುಟ್ಟ ಪೆಟ್ಟಿಗೆಯಲ್ಲಿ ನಾನು ಕಾಣಿಸಿಕೊಳ್ಳುವುದು ಹೇಗೆ ಎಂಬ ಕಸರತ್ತು. ಈ ಕಸರತ್ತು ಇನ್ನು ಮುಂದುವರೆದೆ ಇದೆ. ಸ್ವಂತ ಕೆಲ್ಸಕ್ಕೆ ಇಲ್ಲದ ಕಂಪ್ಯೂಟರ್. ಹೀಗಾಗಿ ವರ್ಷದಿಂದ ಬ್ಲಾಗಿಸಿರಲಿಲ್ಲ. ಗೆಳಯ ಸುಭಾಷ್ ಲ್ಯಾಪ್ಟಾಪ್ ಮತ್ತೆ ಬ್ಲಾಗಿಸಲು ಪ್ರೇರೇಪಿಸಿದೆ. ನನ್ನದೇ ಒಂದು ಕಂಪ್ಯೂಟರ್ ಕೊಳ್ಳುವ ಆಲೋಚನೆಯಲ್ಲಿದ್ದೇನೆ. ಏನೋ ಬರೆದರೆನೆ ತೃಪ್ತಿ . ಮತ್ತೆ ಬರೆಯುವ ಆಸೆ ಮೊಳೆತಿದೆ. ಅದರ ಜೊತೆಗೆ ಬೆಂಗಳೂರು ಬೋರು ಅನ್ನಿಸತಿದೆ.
Subscribe to:
Post Comments (Atom)
8 comments:
ಹೀಗೇ ಮತ್ತಷ್ಟು ಓದುವಾಸೆ.......
ಮತ್ತೆ ಹೋಗ್ರಲ್ಲಾ ದಾರವಾಡಕ್ಕ.. ಏನ್ರಿ ನಮ್ ಬೆಂಗ್ಳೂರಿಗೆ ನೀವು ಬೈಯ್ಯೋದು.ಹೀಗೆಲ್ಲ ಹೇಳದ್ರೆ ತಪ್ಪಗತೈತಿ ನೋಡ್ರಲಾ...
ಬರೆಯಿರಿ ಸರ್..
ಬೆಂಗಳೂರು ಬೇಸರ ತರಿಸಿದರೂ ಬರವಣಿಗೆ ಬೇಸರ ಮರೆಸುತ್ತದೆ..
ಸರ್ ಈ ಲೇಖನ ಓದಿ ನನಗೆ ತುಂಭಾನೆ ಖುಷಿಯಾಗ್ತಾಯಿದೆ. ಏಕೆಂದರೆ ಮೊನ್ನೆ ತಾನೆ ನಿಮ್ಮ ಆಫೀಸ್ನಲ್ಲಿ ನಿಮ್ಮನ್ನು ಬೇಟಿಯಾಗಿದ್ದೆ. ಆಗ ನಾ ಒಂದು ಮಾತು ಹೇಳಿದ್ದೆ " ನೀವು ಧಾರವಾಡದಲ್ಲಿ ಇದ್ದಾಗಲೇ ಚನ್ನಾಗಿ ಇದ್ರಿ ಬೀಡ್ರಿ" ಅಂಥ ಇಗ ಈ ಲೇಕನ ಓದಿದ ಮೇಲೆ ನನ್ನ ಅನಿಸಿಕೆ ಸರಿ ಅಂಥ ಖುಷಿ ಆತು. ಆ ಧಾರವಾಡ ಮಹಿಮೆನೆ ಹಾಗಿದೆ ಸಾರ್. ಪತ್ರಿ ಸಾರಿ ನಿಮ್ಮ ಬ್ಲಾಗ್ ತೆಗೆದು ನಿರಾಶ ಆಗ್ತಿದ್ದ ನನಗೆ ಈ ಸಾರಿ ಹಾಗಾಗ್ಲಿಲ್ಲ. ಹೀಗೆ ಬರಿತಾ ಇರಿ ಗುರುಗಳ
Anna! jana change kelthare! Neevyaake nimma manassannu change madbaradu?
Bahala dinagala nanthara "ondsala" nimma manasina bhaavaneyannu bittharisirivuda nodi khushi agthide..
sir this is manohar. i just visited your blog, and i like your recent write up "matte bareyuvase" so when wil we meet?
bari illade idre bury.. so bari.. chennagide.. munduvareeli show.. break na nantara..!
naij suddiya jate jatege hage sumne barita irrala....!
Post a Comment