ಕಲಿಸಿ, ಬೆಳೆಸಿದ ಮೈಸೂರು ಬೇಡ ಬೇಡ ಎಂದರೂ ಊರು ಸುತ್ತುವ ಆಸೆಯಿಂದ ಮೈಸೂರು ಬಿಟ್ಟಾಗಲೂ ಕಣ್ಣಲ್ಲಿ ನೀರಿತ್ತು. ಮನಸ್ಸು ಒದ್ದೆ ಮುದ್ದೆ ಮಾಡಿಕೊಂಡು ಧಾರವಾಡಕ್ಕೆ ೨೦೦೭ರ ಮೇ ಒಂದರಂದು ಕಾಲಿರಿಸಿದೆ. ಧಾರವಾಡದಲ್ಲಿ ಆಗಿನ್ನೂ ಬಿಸಿಲು. ಅದು ನಿಗಿ ನಿಗಿ ಉರಿದು ಉತ್ತರ ಕರ್ನಾಟಕದ ಬಿಸಿಲ ಝಲಕ್ ನನಗೆ ಅರಿವಾಗುವ ಹೊತ್ತಿಗೆ ಧಾರವಾಡದ ಮೇಲೆ ಕರಿ ಮೋಡಗಳ ಮೆರವಣಿಗೆ ಶುರುವಾಯಿತು. ಮೋಡಗಳು ಎಂದೂ ಒಂದೊಕ್ಕೊಂದು ಡಿಕ್ಕಿ ಹೊಡೆದು ಸಿಡಾರ್, ಗುಡಾರ್ ಎಂಬ ಸದ್ದು ಹೊರಡಿಸದೇ ಧೋ..ಧೋ... ಎಂದು ಮಳೆ ಸುರಿಸಿತು. ಈ ಊರಲ್ಲಿ ಗುಡುಗು, ಸಿಡಿಲು ಬಾರಿಸುವುದೇ ಇಲ್ಲವಾ ಎಂದನಿಸಿತು.
ಧಾರವಾಡದ ಮಳಿ ನಂಬಬ್ಯಾಡ
ಬೆಳಗಾವಿ ಹುಡುಗಿ ನಂಬಬ್ಯಾಡ
ಎಂಬ ಮಾತುಗಳು ಆಗಾಗ ಮಂದಿ ಆಡತೊಡಗಿದರು. ನಾನು ಮಂಡ್ಯ, ಮೈಸೂರು ಭಾಷೆಯಲ್ಲೇ ಮಾತನಾಡಿದರೆ ಜನ ನನ್ನ ಹೊರಗಿನವ ಎಂದೇ ನೋಡತೊಡಗಿದರು. ನಾನು ಅವರಂತೆಯೇ ಮತಾನಾಡುವುದು ರೂಢಿಸಿಕೊಳ್ಳತೊಡಗಿದೆ. ರೊಟ್ಟಿ ಪಲ್ಲೆ ಇಷ್ಟವಾಯಿತು. ಸಂಜೆ ಹೊತ್ತು ಮಿರ್ಚಿ ಗಿರಮಿಟ್ ಪ್ರಿಯವಾಗತೊಡಗಿತು. ನಾನು ಧಾರವಾಡ ಹಚ್ಚಿಕೊಳ್ಳತೊಡಗಿದೆ.
ಆಗ ತಾನೆ ಹಿಟ್ ಆಗಿದ್ದ ಮುಂಗಾರು ಮಳೆ ಸಿನಿಮಾದ ಅನಿಸುತ್ತಿದೆ ಯಾಕೋ ಇಂದು ಹಾಡಿಗಿಂತ ನನಗೆ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಎಂಬ ಹಾಡೇ ಪ್ರಿಯವಾಗತೊಡಗಿತು. ಕಾರಣ, ಬೆಳಗ್ಗೆ ಕಣ್ಣು ಬಿಡುವ ಹೊತ್ತಿಗೆ ಮಳೆ ಸುರಿಯುತ್ತಿತ್ತು. ಎದ್ದವನೇ ಕಂಪ್ಯೂಟರ್ ಆನ್ ಮಾಡಿ ಮುಂಗಾರು ಮಳೆಯೇ ಹಾಡು ಹಾಕುತ್ತಿದ್ದೆ. ಏಕೋ ಗೊತ್ತಿಲ್ಲ ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ ಎಂಬ ಹಾಡು ಶುರುವಾಗುತ್ತಿದ್ದಂತೆ ಮನೆ ಹಿಂದಿನ ಅಪಾರ್ಟ್‌ಮೆಂಟಿನ ಬಾಲ್ಕನಿಯಲ್ಲಿ ಅವಳು ನಿಂತು ಮಳೆ ನೀರು ಹಿಡಿಯುತ್ತಾ ನಿಲ್ಲುತ್ತಿದ್ದಳು. ಅವಳೂ ಇದೇ ಹಾಡು ಗುನುಗುತ್ತಿದ್ದಳು. ನಾನು ಅದನ್ನು ಮೆರೆಯಲ್ಲೇ ನಿಂತು ನೋಡಬೇಕು. ನಾನು ಕಂಡರೆ ಆಕೆ ಮರೆಯಾಗಿ ಬಿಡುತ್ತಿದ್ದಳು. ಆ ಮಳೆ ಅವಳಿಗೆ ಅದ್ಯಾವ ನೆನಪು ತರಿಸುತಿತ್ತೋ...? ಮಳೆ ಮುಗಿಯುವ ಹೊತ್ತಿಗೆ ಅವಳ ಇಹ ಪರ. ಅವಳ ಇಂಜಿನಿಯರಿಂಗ್ ಕಾಲೇಜಿನ ಹುಡುಗ ಎಲ್ಲರೂ ಗೊತ್ತಾದರು.
ಮಳೆ ತನ್ನ ಬಿರುಸು ಕಳೆದುಕೊಳ್ಳುವ ಹೊತ್ತಿಗೆ ನನ್ನ ನೆರಳಿನಂತೆಯೇ ಕಾಯುವ ಗೆಳೆಯ ಕಲಂದರ್ ನನಗೆ ಮಳೆಯಲ್ಲೇ ಅರ್ಧ ಧಾರವಾಡ ತೋರಿಸಿದ್ದರು. ಊರು ನೋಡು ನೋಡುತ್ತಾ ಕಣ್ಮಣಿಗೂ ತೋರಿಸುತ್ತಾ ಮಳೆಯಲ್ಲೇ ತಿರುಗಾಡಿದೆ. ಮಳೆ ಮುಗಿದು ಚಳಿ ಆವರಿಸುವ ಹೊತ್ತಿಗೆ ಕಣ್ಮಣಿ ಆರೋಗ್ಯ ಸುಧಾರಿಸಿ, ಟಾಟಾ ಹೇಳಿಯಾಗಿತ್ತು. ಆದರೆ, ಬೆಳ ಬೆಳಗ್ಗೆ ಏಳುವ ಚಟ ಹೋಗಿರಲಿಲ್ಲ. ನಮ್ಮ ಹುಬ್ಬಳ್ಳಿ ಆವೃತ್ತಿಯೂ ಶುರುವಾಗಿತ್ತು. ಕೆಲಸದ ಜವಾಬ್ದಾರಿ ಜೊತೆಗೆ, ಅಷ್ಟರಲ್ಲಿ ಸರ್ಕ್ಯೂಲೇಷನ್ ವಿಭಾಗಕ್ಕೆ ನಮ್ಮ ಚಿಕ್ಕಮಠ ಬಂದು ರೂಂ ಮೇಟ್ ಆದ. ಟಾಟಾ ಮರೆತು ಕೆಲಸದಲ್ಲಿ ಸಕ್ರಿಯನಾದೆ. ಧಾರವಾಡದ ಊರೂರು ಸುತ್ತುತ್ತಾ ವಿಶೇಷ ವರದಿಗಳ ಹೆಕ್ಕಿ ತಂದೆ. ಇವ ಸಣ್ಣ ಹುಡುಗ ಅಂದುಕೊಂಡವರು ಮೆಚ್ಚುಗೆಯಿಂದ ನೋಡ ತೊಡಗಿದರು. ಕೆಲವರು ಸಣ್ಣ ಕಿರಿಕಿರಿ ಮಾಡಿದರು. ಅದು ನನ್ನ ಆತ್ಮವಿಶ್ವಾಸ ಹೆಚ್ಚಿಸಿತು. ಒಂದು ವರ್ಷ ಕಳೆಯುವುದರ ಒಳಗೆ ನಾನು ಧಾರವಾಡಿಗನಾಗಿದ್ದೆ.
ಧಾರವಾಡದ ಸುದ್ದಿಗಾರರ ಪೈಕಿ ನಾನೇ ಅತಿ ಚಿಕ್ಕ ವಯಸ್ಸಿನವನಿದ್ದೆ. ಒಂದು ವರ್ಷ ಕಳೆಯುವುದರೊಳಗೆ ಧಾರವಾಡ ಮೀಡಿಯಾದಲ್ಲಿ ಹೊಸಬರು ಬಂದರು. ನಾನು ಹಳಬನಾಗಿದ್ದೆ. ಪತ್ರಕರ್ತರೆಲ್ಲರ ಮಿತ್ರ ಡಾ. ಶ್ಯಾಮಮೂರ್ತಿ ನಾಯಕ ಅಚ್ಚುಮೆಚ್ಚಾಗಿದ್ದ. ಆವರ ೭೫ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದೆವು. ಎದುರಾದ ಸವಾಲುಗಳೆಲ್ಲಾ ನನ್ನ ಗಟ್ಟಿಯಾಗಿಸಿದವು. ಮಧ್ಯೆ ಬೇರೆಲ್ಲೋ ಅಲೆಯುವ ಆಸೆಯಾಗಿ ಮತ್ತೆ ಧಾರವಾಡಕ್ಕೆ ಮರಳಿದ್ದೆ. ಚುನಾವಣೆ ಕೆಲಸಗಳಿಗಾಗಿ ಬೆಳಗಾವಿ ಜಿಲ್ಲೆ ಸುತ್ತಾಡುವ ಅವಕಾಶ ಸಿಕ್ಕಿತು. ಈಗ ಮತ್ತೆ ಧಾರವಾಡದ ಮೇಲೆ ಕರಿ ಮೋಡಗಳ ಮೆರವಣಿಗೆ ಶುರುವಾಗಿದೆ. ಆದರೆ, ಈ ಬಾರಿ ಸಿಡಿಲು ಗುಡುಗು ಜೋರಾಗಿದೆ. ನನ್ನ ನಿರೀಕ್ಷೆ, ಬೇಡಿಕೆಯಂತೆಯೇ ಬೆಂಗಳೂರಿಗೆ ಬಾ ಎಂದು ಸಂಪಾದಕರು ಸೂಚಿಸಿದ್ದಾರೆ. ನನ್ನ ಬದುಕಿನ ಬಂಡಿ ಬೆಂಗಳೂರಿನತ್ತ ಹೊರಟಿದೆ. ಆದರೆ, ಇಲ್ಲಿ ಸಿಕ್ಕ ಗೆಳೆಯರು ಸಂಖ್ಯೆ, ಅವರು ತೋರಿದ ಪ್ರೀತಿ, ವಿಶ್ವಾಸ ಅಪಾರ. ಅವರ ಹೆಸರು ಬರೆದರೇ ಒಂದು ಪುಟವಾಗುತ್ತೆ. ಆ ಎಲ್ಲ ಗೆಳೆಯರ ಒಡನಾಟ, ಮಾತುಗಳು ಕೈ ಜಗ್ಗುತ್ತಿದೆ. ಕಣ್ಣಲ್ಲಿ ನನಗೇ ಗೊತ್ತಿಲದೆ ಹನಿಗೂಡಿ ವಿದಾಯ ಹೇಳುತ್ತಿವೆ. ನನ್ನೂರಿನ ಗೆಳೆಯರಿಗೆ ನಾನು ಬೆಂಗಳೂರಿಗೆ ಬರುತ್ತಿರುವುದು ಖುಷಿ. ಇಲ್ಲಿನ ಗೆಳೆಯರಿಗೆ ಕಷ್ಟ. ನನಗೆ ಎರಡೂ ಆಗುತ್ತಿದೆ. ಆದರೆ, ಧಾರವಾಡದ ಮೇಲಿನ ಮೂಹ ಎಷ್ಟಿದೆಯೆಂದರೇ.. ಐದು ದಿನಗಳಿಂದ ಯಾಕೋ ಊರಿಗೆ ಫೋನ್ ಮಾಡಿಲ್ಲ. ಅಲ್ಲಿ ಸಂಭ್ರಮದ ಮಾತು ಕೇಳಿ ಬರುತ್ತವೆ. ಯಾಕೋ ಫೋನ್ ಮಾಡಬೇಕು ಅನಿಸುತ್ತಲೂ ಇಲ್ಲ. ಎಮೋಷನಲ್ ಫೂಲ್ ಆಗಬೇಡ ಎಂಬ ಕಣ್ಮಣಿಯ ಮಾತುಗಳು ನೆನಪಾಗುತ್ತವೆ. ಸವಿ ನೆನಪುಗಳ ಹೊತ್ತು ಬೆಂಗಳೂರಿಗೆ ಹೊರಟಿದ್ದೇನೆ. ಮತ್ತೆ ಮಳೆ ಉಯ್ಯುತ್ತಿದೆ, ಎಲ್ಲಾ ನೆನಪಾಗುತ್ತಿದೆ....,
9 comments:
ಅವಿ...
ನಂಗೂ ಹಿಂದಿನ ನೆನಪು ಮರುಕಳಿಸಿತು. ನಾನು ಕೆಲಸ ಮಾಡುವಾಗ ಅಲ್ಲಿ ನಾನೇ ಚಿಕ್ಕವನಾಗಿದ್ದೆ!!.ಎಲ್ಲರೂ ಹಂಗಿಸುವವರೇ ಆಗಿದ್ದರು.ಕೆ.ಪಿ.ಇಂದ ಅಪಾಂಯ್ಟಮೆಂಟ್ ಲೇಟರ್ ಬರುವವರೆಗೂ ಹಾಗೆ ಮಾಡುತ್ತಿದ್ದವರು ಆಮೇಲೆ ಸುಮ್ಮನಾದರು. ವಿಶೇಷ ವರದಿ ಎಲ್ಲರಗಿಂತ ಹೆಚ್ಚಿಗೆ ಬಂದ ಮೇಲೆ,ಇಂಟರನೆಟ್ ಇಂದ ನ್ಯೂಸ್ ಬೇಗ ಹೋಗಿವಿದನ್ನು ನೋಡಿ ಸುಮ್ಮನಾಗಿ ತಾವು ಕಲಿತರು.ಆದರೆ ಆ ಅನುಭವ ಇವಾಗ ನೆನೆದರೆ ಎಷ್ಟು ಮಜ ಅನ್ನ್ನಿಸುತ್ತದೆ!!. ನಮ್ಮ ನೋಡಿ ಅಸೂಯೆ ಪಡದೆ ಇದ್ದಿದ್ದರೆ ಸಾಧನೆ ಮಾಡಲು ಮನಸ್ಸೆ ಬರದು ಅಲ್ವಾ!!
ಇರಲಿ. ನಿನ್ನ ಪಯಣ ಈಗ "ನಮ್ಮೂರಿಗೆ" ಬರುತ್ತಿದೆ. ಇಷ್ಟು ದಿನ ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತಿದ್ದು ಸಾಕು.!!:) ಶುಭವಾಗಲಿ...
ಅದಕ್ಕೆ ಸಾರ್ ನಾನು ಹೇಳಿದ್ದು...ಬದುಕು ಜಟಕಾ ಬಂಡಿ...ವಿಧಿ ಅದರ ಸಾಹೇಬ ಎಂದು"....ನಾನು ನೀವು ಸೇರಿ ಧಾರವಾಡದಲ್ಲಿ ಕಳೆದ ದಿನಗಳನ್ನು ಮರೆಯಲು ಸಾಧ್ಯವಿಲ್ಲ...ನನಗೆ ಗೊತ್ತಿದೆ ಬೆಂಗಳೂರಿನ ಯಾಂತ್ರೀಕೃತ ಜೀವನದಲ್ಲಿ ನಾವು ಭೇಟಿಯಾಗದೆ ಇರಬಹುದು...ಆದರೆ ನೆನಪುಗಳ ಮಾತು ಮಧುರ....
Bangalore ge swagatha.
Baduku nintha neeraagabaaradu.
Sadaa hariyutthirabeku. Aagale nimma naija jeevanada anaavarana thilivudu.
Adirali! Aaa AVALU yenaadaru?
SharmilaNataraj
ಗುರು ನಿಜ ಹೇಳ್ತೀನಿ (ಇಷ್ಟ ದಿಂನನು ನಿಜಾನೆ ಹೇಳ್ತಿದ್ದೆ) ನಿನ್ನ ಎ ಪೋಸ್ಟ್ ಉ ತುಂಬಾ ನೆ ಖುಷಿ ಕೊಡ್ತು:ಯಾಕಂದ್ರೆ ಅಳುನೆ ಬರಿಸ್ತು ಕಣೋ...ಅ ಹುಡುಗಿ ಏನಾದಳು ಗುರು...ನೀನು ಹೊಸ ಊರಿಗೆ ಒಗ್ಗಿಕೊಲ್ತಿಯ ಬಿಡಿ..ಊರಿಗೂ ಹೋಗ್ತಿಯ ನೀರಿಗೂ ಹೋಗ್ತಿಯ ಆದ್ರೆ ನೀರೆಯನ್ನ ನೋಡಿ ಪುಲಕಿತ ಅದೇ ಅಂದಿದ್ದು ಇದೆ ಮೊದ್ಲೆಂಪ್ಪ:ನನಗೆ ಗೊತ್ತಿರೋ ಮಟ್ಟಿಗೆ...
ನಿಮ್ಮಗೆ ನಮ್ಮ ತುಂಬು ಹೃದಯದ ಸ್ವಾಗತ
avi anna.. shivanna helida... aa dina dharwad railve stationalli avann tbkond kanner hakide anta... actually avat ninn nodok barbeku anakondidde, vanu bandidrind nan barokaglilla. shivann helid kelid mele manasge tumba kasivisi aytu. duradind nodorge neen heege anta artha adre nammappan ane guruve. adre ninnolage hinth vabb bhavadumbi iddane anta nin ellu torisad hage baduktiyalla.. ad hego eno... nangagallappa.
nanu sentiment vishayadalli purti nin tarane... bagila hakkondu alonu... bayalalli ekant baysaonu....
houdu... malege aata mado avalann nenap madkondidiyalla yake,,? aval matu astakke mugita..? heeg bandu haag hodla avalu... aval bagge innast bariyo aana. tumba satayisbeda ardha ardha bardu.. ayaa...?
matte... nangu ningu ettanind ett sambandhvayya...?
dharwadadalli laxantara jana idare... adre dharwad andaxana nenp agodu avi anna matra... nin barok munche yarann nenskotidde...?
MALE HUYYOK SHIRU MADLI NENAPAGABAHUDU...
aniway... majawagiru anna...
andahage.. bengalorelli innu male huyidilva....? huyid kudle bari... avalannu serisi...
You are happy when you started from Mysore to Dh. It is for the same reason u r getting ready/gone to Bangalore. Right. Dont be emotional. you are a journalist. we hope for a bright future that too in KP..
Bangalore ge hoda mele hegidiya antha bareilvallo? bareyo....
ಅಣ್ಣ ನಿನ್ನ ಬ್ಲಾಗ್ ಮುಂದುವರೆಸಿ......ಆದಷ್ಟು ಬೇಗ
Post a Comment