Saturday, July 17, 2010

ಮತ್ತೆ ಬರೆಯುವಾಸೆ......?!



ನಿಮ್ಮ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ
ಧಾರವಾಡದ ಜನದ ಮನ ತೋರಿದ ಪ್ರೀತಿಗೆ
ಇಲ್ಲ ಯಾವುಧೆ ಹೋಲಿಕೆ
ಪ್ರೀತಿ ಹೀಗೆ ಇರಲಿ
ಹೋಗಿ ಬರುವೆ

ಎಂದು ಮೆಸ್ಸಜಿಸುವ ಹೊತ್ತಿಗೆ ಕಣ್ಣು ಕಾಣದಷ್ಟು ನೀರು ಹರಿಯ ತೊಡಗಿತ್ತು. ಮೈಸೂರ್ ಬಿಟ್ಟು ಧಾರವಾಡಕ್ಕೆ ಹೋಗುವಾಗಲು ಹೀಗೆ ಆಗಿತ್ತು. ಗೊತ್ತಿಲ್ಲದ ಜನ, ಮನ ಬದುಕುವುದು ಹೇಗೋ ಎನ್ನುವ ಆತಂಕ ಒತ್ತುಕೊಂಡೆ ಹೋಗಿದ್ಧೆ. ಬಟ್ ಕೆಲವೇ ದಿನದಲ್ಲಿ ನಾನು ಧಾರವಾಡಿಗನಾಗಿಬಿಟ್ಟೆ. ಧಾರವಾಡವನ್ನು ಬಿಟ್ಟು ವರ್ಷ ಆಗಿ ಹೋಯ್ತು. ಆದರು ಧಾರವಾಡವನ್ನು ಪದೇ ಪದೇ ಮಿಸ್ ಮಾಡ್ಕೊತಿದಿನಿ. ನನ್ನ ಮಾತಿನ ಶೈಲಿಯಲ್ಲಿ ಇನ್ನು ಧಾರವಾಡದ ಸೊಗಡಿದೆ. ಹೀಗಾಗಿ ತುಂಬಾ ಜನ ನೀವು ಧಾರವಾಡದವರ ಅಂತಾರೆ. ನಾನು ಎಸ್ ಅಂತೇನೆ.

ಬೆಂಗಳೂರಿಗೆ ಹೋದ ಮೇಲೆ ಬದಲಾಗ್ತಿಯ ಅಂತ ಕೆಲವರು ಹೇಳಿದ್ರು. ಹೌದು ಅವರ ಅರ್ಧ ಮಾತು ನಿಜವಾಗಿದೆ. ಬೆಂಗಳೂರಿಗೆ ಬಂದ ಕೇವಲ ನಾಲ್ಕು ತಿಂಗಳಲ್ಲಿ ಕೆಲಸ ಬದಲಾಯ್ತು. ಅದಕ್ಕೆ ತಕ್ಕಂತೆ ಕೆಲ ಕಾಲ ಬಟ್ಟೆಯೂ ಬದಲಾಗಿತ್ತು. ನನ್ನ ದಡೂತಿ ದೇಹ, ನನ್ನ ಯೋಚನೆ, ಯೋಜನೆ ಮಾತ್ರ ಬದಲಾಗಲಿಲ್ಲ. ಟಿವಿ ಸೇರಿದ ಮೇಲೆ ಬರವಣಿಗೆ ಅನ್ನೋದು ನಿಂತೇ ಹೋಗಿದೆ.
ಬೆಂಗಳೂರು ಕನ್ನಡಪ್ರಭ ದಲ್ಲಿ ಇರುವಷ್ಟು ದಿನ ಬೆಂಗಳೂರಿನ ಆತುರಕ್ಕೆ ಹೊಂದಿಕುಳ್ಳುವುದೇ ಆಗಿತ್ತು. ಅದಾದ ಮೇಲೆ ಟಿವಿ ಎಂಬ ಪುಟ್ಟ ಪೆಟ್ಟಿಗೆಯಲ್ಲಿ ನಾನು ಕಾಣಿಸಿಕೊಳ್ಳುವುದು ಹೇಗೆ ಎಂಬ ಕಸರತ್ತು. ಈ ಕಸರತ್ತು ಇನ್ನು ಮುಂದುವರೆದೆ ಇದೆ. ಸ್ವಂತ ಕೆಲ್ಸಕ್ಕೆ ಇಲ್ಲದ ಕಂಪ್ಯೂಟರ್. ಹೀಗಾಗಿ ವರ್ಷದಿಂದ ಬ್ಲಾಗಿಸಿರಲಿಲ್ಲ. ಗೆಳಯ ಸುಭಾಷ್ ಲ್ಯಾಪ್ಟಾಪ್ ಮತ್ತೆ ಬ್ಲಾಗಿಸಲು ಪ್ರೇರೇಪಿಸಿದೆ. ನನ್ನದೇ ಒಂದು ಕಂಪ್ಯೂಟರ್ ಕೊಳ್ಳುವ ಆಲೋಚನೆಯಲ್ಲಿದ್ದೇನೆ. ಏನೋ ಬರೆದರೆನೆ ತೃಪ್ತಿ . ಮತ್ತೆ ಬರೆಯುವ ಆಸೆ ಮೊಳೆತಿದೆ. ಅದರ ಜೊತೆಗೆ ಬೆಂಗಳೂರು ಬೋರು ಅನ್ನಿಸತಿದೆ.